May 2021 - Jiyo Jee Barke|Live Free

LATEST POSTS

Saturday, May 15, 2021

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೇಹವನ್ನು ತಂಪಾಗಿಡಲು 11 ಸೂತ್ರಗಳು.
May 15, 2021 2 Comments


ನಾವು ಈ   ಲೇಖನದಲ್ಲಿ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಮನೆಯ ಸಿಧೌಷದಿಗಳ ಬಗ್ಗೆ ಹಾಗೂ ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪಾಗಿಸುವ ಉಪಾಯಗಳ ಬಗ್ಗೆ ತಿಳಿಯೋಣ. 

ಕಷಾಯವನ್ನು ನಮ್ಮ ಆಯುರ್ವೇದದ ಒಂದು ಉತ್ತಮವಾದ ಕೊಡುಗೆ ಎಂದು ಭಾವಿಸಲಾಗಿದೆ. ಇದು ಎಲ್ಲಾ ವಯಸ್ಸಿನವರು ಸೇವಿಸುವ ಒಂದು ಪಾನೀಯವಾಗಿದೆ. ಕಷಾಯವು ನಮ್ಮ ದೇಹವನ್ನು ರೋಗಾಣುಗಳಿಂದ ರಕ್ಷಿಸಲು ಸಹಕಾರಿಯಾಗಿದೆ. ಇದು ಕೆಮ್ಮು, ನೆಗಡಿ, ಜ್ವರ ಇತ್ಯಾದಿ ರೋಗಗಳಿಗೆ ರಾಮಬಾಣ ಎಂದರೆ ತಪ್ಪಾಗದು.




ಕಷಾಯ ಮಾಡುವ ವಿಧಾನ:

ಶುಂಠಿ, ಎಲಕ್ಕಿ,ಲವಂಗ, ಪತ್ರೆ, ಅಜಿವಾಣ,೪ ದಳ ತುಳಸಿ ಎಲೆ, ಕಾಳು ಮೆಣಸು, ಒಂದು ಇಂಚು ದಾಲ್ಚಿನ್ನಿ ಯನ್ನು ಎರಡು ಕಪ್ ನೀರಿಗೆ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. 5 ನಿಮಿಷದ ನಂತರ ಅದಕ್ಕೆ ಸ್ವಲ್ಪ ಬೆಲ್ಲ ಹಾಕಬೇಕು. ಬೆಲ್ಲ ಕರಗಿದ ನಂತರ ಸೋಸಿ ಬಟ್ಟಲಿಗೆ ಹಾಕಿಕೊಂಡು ಸೇವಿಸಬೇಕು. 



https://youtu.be/o9nOHXQrt20




ರೋಗ ನಿರೋಧಕ ಶಕ್ತಿ ಹೆಚ್ಚಿಸಿ:

1.ಪುದೀನ ಎಲೆ ಅಥವಾ ಓಮದಕಾಳುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಹಬೆ (ಆವಿ) ಯನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳುವುದು.

2.ಒಣಕೆಮ್ಮು ಹಾಗೂ ಗಂಟಲು ಕೆರೆತವಿದ್ದಲ್ಲಿ 1  ಲವಂಗವನ್ನು ಬಾಯಿಯಲ್ಲಿ ಸ್ವಲ್ಪ ಅಗಿದು ಇಟ್ಟು ಕೊಂಡು ಮಲಗಿದರೆ ಕೆಮ್ಮು ಕಡಿಮೆಯಾಗುತ್ತದೆ. 

3.ಪ್ರತಿದಿನ ಯೋಗಾಸನ , ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು.

4.ನಿಯಮಿತವಾಗಿ ಬಿಸಿ ನೀರು ಕುಡಿಯುವುದು.

5.ಅಡುಗೆಯಲ್ಲಿ ಅರಿಶಿನ , ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು.

6.ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 2 - 3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಬೇಕು . ಇದನ್ನು ದಿನಕ್ಕೆರಡು ಬಾರಿ ಮಾಡುವುದು.

7.ಒಣಕೆಮ್ಮು ಹಾಗೂ ಗಂಟಲು ಕೆರೆತವಿದ್ದಲ್ಲಿ 1 -2 ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2 - 3 ಬಾರಿ ಸೇವಿಸುವುದು.



8.ಪ್ರತಿದಿನ ಬೆಳಿಗ್ಗೆ ಶುಂಠಿಯನ್ನು ಕುಟ್ಟಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿಕೊಂಡು ಶುಂಠಿ ಕಷಾಯ ಮಾಡಿ ಕುಡಿಯಬೇಕು. 

9.ಪ್ರತಿದಿನ ಬೆಳಿಗ್ಗೆ 4-5 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಬರಿಬಾಯಲ್ಲಿ ತಿನ್ನುವದರಿಂದ ಕೆಮ್ಮು, ನೆಗಡಿ ಬರುವುದಿಲ್ಲ.

 

10.ಪ್ರತಿದಿನ ಒಣ ಶುಂಠಿ ಮತ್ತು ಬೆಲ್ಲವನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿ ಸ್ವಲ್ಪ ಸ್ವಲ್ಪ ತಿನ್ನುವುದರಿಂದ ಕೆಮ್ಮು, ನೆಗಡಿ ಬರುವುದಿಲ್ಲ. 

11.ಪ್ರತಿದಿನ ಬೆಳಿಗ್ಗೆ 2 ಕಪ್ ಬಿಸಿ ನೀರಿಗೆ ನಿಂಬೆ ರಸ ಹಾಕಿ ಸೇವಿಸುವುದರಿಂದ ನಿಮ್ಮ ದೇಹವನ್ನು ತಂಪಾಗಿಡಬಹುದು ಮತ್ತು ಬೊಜ್ಜನ್ನು ಕರಗಿಸುವುದು. 












ಬೇಸಿಗೆಯ ಬಿಸಿಯನ್ನು ತಂಪಾಗಿಸಬೇಕೇ:

1.ದಿನಕ್ಕೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ತೂಕ ಕಮ್ಮಿಯಾಗುವುದರ ಜೊತೆಗೆ ಆಹಾರದಲ್ಲಿರುವ ಅಸಿಡಿಟಿ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

2.ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

3.ದೇಹದ ಉಷ್ಣತೆನ್ನು ಸಕ್ಕರೆ ಇರುವ ಆಹಾರ ಪದಾರ್ಥಗಳೂ ಹೆಚ್ಚಿಸುತ್ತವೆ. ಜೇನು ಮತ್ತು ಕಾಕಂಬಿ ಸೇವನೆಯನ್ನು ಬಿಡಿ. ತರಕಾರಿ ಮತ್ತು ಹಣ್ಣುಗಳಲ್ಲಿ ಇರುವ ನೈಸರ್ಗಿಕ ಸಕ್ಕರೆಯನ್ನು ಅಧಿಕವಾಗಿ ಸೇವಿಸಿ.

4.ಬೇಸಿಗೆಯಲ್ಲಿ ಉಷ್ಣವನ್ನುಂಟು ಮಾಡುವ ಆಹಾರಗಳನ್ನು ಸೇವಿಸದಿರಿ. ಪಾಲಾಕ್, ಕರಿಮೆಣಸು, ಮೂಲಂಗಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸದಿರಿ. ಮಸಾಲೆ ಪದಾರ್ಥಗಳ ಸೇವನೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

5.ಒಣ ಹಣ್ಣುಗಳು ಆರೋಗ್ಯಕರ ಮತ್ತು ಪೋಷಕಾಂಶಭರಿತವಾಗಿರುತ್ತವೆ. ಅದಾಗ್ಯೂ ಇವುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತವೆ ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಸೇವಿಸದಿರುವುದೇ ಒಳಿತು. ಬೇಸಿಗೆಯಲ್ಲಿ ಒಣಹಣ್ಣುಗಳ ಬದಲಿಗೆ ತಾಜಾ ಹಣ್ಣುಗಳನ್ನೇ ಅಧಿಕವಾಗಿ ಸೇವಿಸಿ.

6.ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡು ಕೆಫೇನ್ ಮತ್ತು ಸಕ್ಕರೆ ಬೆರೆತ ಪಾನೀಯಗಳನ್ನು ಆದಷ್ಟು ಬೇಸಿಗೆಯಲ್ಲಿ ಕಡಿಮೆ ಸೇವಿಸುವುದು ಒಳಿತು.

7.ನಿಮ್ಮ ಪಾದಗಳನ್ನು ಬಕೆಟ್‌ಗಳಲ್ಲಿ ನೆನೆಸಿ, ಒದ್ದೆಯಾದ ಟವೆಲ್‌ಗಳನ್ನು ಭುಜದ ಮೇಲೆ ಅಥವಾ ತಲೆಯ ಮೇಲೆ ಇರಿಸಿ.

8.ಪಾತ್ರೆ ಅಥವಾ ಬಕೆಟ್ ತುಂಬಾ ನೀರು ಶೇಖರಿಸಿ ರೂಮ್ನಲ್ಲಿ ಇರಿಸಿ , ತಾಪಮಾನ ಇಳಿಯುತ್ತದೆ.

9.ಕಿಡಕಿಗೆ ಒದ್ದೆಯಾಗಿರುವ ಪಂಚೆ ಅಥವಾ ಟವೆಲ್ ಹಾಕಿ, ರೂಮ್ ತಂಪಾಗುವುದು.

10.ತಾಜಾ ಹಣ್ಣಿನ ರಸ, ಹಣ್ಣುಗಳ ಸೇವನೆ ಅಂತೆಯೇ ನಿಯಮಿತವಾಗಿ ನೀರನ್ನು ಸೇವಿಸುತ್ತಲೇ ಇರಬೇಕು.

11.ಪ್ರತಿದಿನ ಬೆಳಿಗ್ಗೆ 2 ಕಪ್ ಬಿಸಿ ನೀರಿಗೆ ನಿಂಬೆ ರಸ ಹಾಕಿ ಸೇವಿಸುವುದರಿಂದ ನಿಮ್ಮ ದೇಹವನ್ನು ತಂಪಾಗಿಡಬಹುದು. 

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಣ್ಣಗಾಗಿಸುವ ನಮ್ಮ ಸಲಹೆಗಳು ನಿಮಗೆ ಇಷ್ಟವಾದವು ಎಂದು ನಾನು ಭಾವಿಸುತ್ತೇನೆ.

                                                 😊😊ಧನ್ಯವಾದಗಳು😊😊

Reading Time:

Saturday, May 8, 2021

ಕೋವಿಡ್‌– 19‘ ಎರಡನೇ ಅಲೆ ಬಗ್ಗೆ ತಿಳುವಳಿಕೆ
May 08, 20211 Comments

  




COVID 19 Or CORONA  ರೋಗ:

ಭಾರತದಲ್ಲಿ ‘ಕೋವಿಡ್‌– 19‘ ಎರಡನೇ ಅಲೆ ರೋಗ ಲಕ್ಷಣಗಳಿಲ್ಲದವರಿಗೆ ಹೊಸ ಸವಾಲುಗಳನ್ನು ಒಡ್ಡಿದೆ. ಕೊರೊನಾ ವೈರಸ್‌ನ ಹೊಸ ತಳಿ(ಡಬಲ್‌ ಮ್ಯುಟಯಂಟ್ ಅಥವಾ ಬಿ.1.617)ಯ ರಚನೆಯಲ್ಲಾಗಿರುವ ಬದಲಾವಣೆಯಯಂದಾಗಿ ಆರ್‌ಟಿ– ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ವ್ಯಕ್ತಿಗೂ ಕೊರೊನಾ ಸೋಂಕಿರುವ ಸಾಧ್ಯತೆ ಇದೆ ಎಂದು ಕೆಲವು ವೈದ್ಯರು ಹೇಳುತ್ತಿದ್ದಾರೆ. ಕೆಲವು ತಜ್ಞರು ಇದನ್ನು ಸ್ಪಷ್ಟಪಡಿಸುತ್ತ, ಆರ್‌ಟಿ–ಪಿಸಿಆರ್ ಪರೀಕ್ಷೆ ಶೇಕಡಾವಾರು75ರಷ್ಟು ಮಾತ್ರ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ ಎಂದಿದ್ದಾರೆ. ವೈರಸ್‌ ದೇಹದೊಳಗೆ ಮತ್ತುಷ್ಟೂ ಆಳಕ್ಕೆ ಸೋರಿಕೊಳ್ಳುವುದರಿಂದ ‘ಸುಳ್ಳು–ನೆಗೆಟಿವ್‌’ ಫಲಿತಾಂಶ ನೀಡುತ್ತಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈ ಮಾಹಿತಿಯನ್ನು ಪಜಾವಾಣಿ COVID 19 ಕೈಪಿಡಿಯಲ್ಲಿಯೂ ಕೂಡಾ ತಿಳಿಸಿದೆ. 


ವೈರಸ್ ಹೇಗೆ ಹರಡುತ್ತದೆ ?

ಸಾರ್ಸ್‌–ಕೋವ್‌–2 ವೈರಸ್‌ನಿಂದ ‘ಕೋವಿಡ್‌-19‘ ರೋಗ ಬರುತ್ತದೆ. 

ಸೋಂಕಿತ ವ್ಯಕ್ತಿಯ ನಿಕಟ ಸಂರ್ಪಕಕ್ಕೆ ಬಂದ ಮತ್ತೊಬ್ಬ ವ್ಯಕ್ತಿಗೆ ಈ ರೋಗ ಹರಡುತ್ತದೆ.

ಸೋಂಕು ತಗುಲಿದ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ, ಮಾತನಾಡುವಾಗ ಅಥವಾ ಉಸಿರಾಡುವಾಗ, ಬಾಯಿ ಅಥವಾ ಮೂಗಿನಿಂದ ಚಿಮ್ಮುವ ದ್ರವದ ಕಣಗಳಿಂದ ಸೋಂಕು ಹರಡಬಹುದು.ಈ ದ್ರವದ ಕಣಗಳು ವಿಭಿನ್ನ ಗಾತ್ರಗಳಲ್ಲಿರುತ್ತವೆ. ಉಸಿರಾಡುವಾಗ ಚಿಮ್ಮುವ ದಪ್ಪ ಕಣಗಳಿಂದ ಹಿಡಿದು ಏರೊಸೋಲ್ಸ್ ‌ರೂಪದ ಸಣ್ಣ ಕಣಗಳಾಗಿಯೂ ಇರುತ್ತವೆ. 

∆ ದೊಡ್ಡ ಹನಿಗಳು ಕಣ್ಣಿಗೆ ಕಾಣುತ್ತವೆ. ಅವು ತಮ್ಮ ಮೂಲದಿಂದ (ಇಲ್ಲಿ ವ್ಯಕ್ತಿ) ಬಹು ಕ್ಷಿಪ್ರವಾಗಿ, ಕೆಲವೋ ಸೆಕೆಂಡು ಅಥವಾ ನಿಮಿಷಗಳಲ್ಲಿ ಗಾಳಿಯಲ್ಲಿ ತೇಲಿ ಕೆಳಗೆ ಬೀಳುತ್ತವೆ.

∆ ಅದೇ ಹನಿಗಳು ಮತ್ತು ಕಣಗಳು ಗಾತ್ರದಲ್ಲಿ ಚಿಕ್ಕದಾಗಿ ಇದ್ದರೆ, ಅವುಗಳು ಗಾಳಿಯಲ್ಲಿ ತೇಲಿದಾಗ ಬಹಳ ಬೋಗನೆ ತೇವಾಂಶ ಕಳೆದುಕೊಂಡು ಒಣಗುತ್ತವೆ. ಈ ರೀತಿ ಒಣಗಿದ ರೂಪದಲ್ಲಿರುವ ಹನಿಗಳು/ಕಣಗಳು ಗಂಟೆಗಳ ಕಾಲ ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಗಾಳಿಯೊಂದಿಗೆ ಇವು ಬಹಳ ದೂರದವರೆಗೂ ಚಲಿಸಬಲ್ಲವು.

ಸುರಕ್ಷಿತವಾಗಿರುವುದು ಹೇಗೆ? 

1. ಮನೆಯಲ್ಲೇ ಇರಿ. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗಿ.

 2. ಮನೆಯಿಂದ ಹೊರ ಹೋಗುವಾಗ ಅಥವಾ ಮನೆಯಲ್ಲಿ ಯಾರಿಗಾದರೂ ಸೋಂಕು ತಗುಲಿದ್ದರೆ.. ಎಲ್ಲಸಮಯದಲ್ಲೂ ಎರಡು ಪದರಗಳಿರುವ ಮುಖಗವಸು(ಮಾಸ್ಕ್‌) ಬಳಸಿ.

3. ಮನೆಯಿಂದ ಹೊರಗಡೆ ತೆರಳಿದಾಗ, ವ್ಯಕ್ತಿಗಳಿಂದ ಕನಿಷ್ಠ 6 ಅಡಿಯಷ್ಟು ಅಂತರ ಕಾಯ್ದುಕೊಳ್ಳಿ.

4. ಸಭೆ–ಸಮಾರಂಭಗಳಂತಹ ಜನ ಸೇರುವ ಜಾಗಗಳಿಗೆ ಹೋಗುವುದನ್ನು ನಿಲ್ಲಿಸಿ.

5. ಅನಾರೋಗ್ಯದಿಂದ ಬಳಲುತ್ತಿರುವವರಿಂದ ದೂರವಿರಿ.

6. ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳುವ ಅಭ್ಯಾಸವನ್ನು ಕಡಿಮೆ ಮಾಡಿ.

7. ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲೇ ಇರಿ.

8. ಕೆಮ್ಮುವಾಗ ಮತ್ತು ಸೀನುವಾಗ ಟಿಶ್ಯೂಪೇಪರ್‌ನಿಂದ ಬಾಯಿಯನ್ನು ಮುಚ್ಚಿಕೊಳ್ಳಿ. ನಂತರ ಟಿಶ್ಯೂ ಪೇಪರ್‌ ಅನ್ನು ಕಸದ ಬುಟ್ಟಿಗೆ ಹಾಕಿ.

9. ನೀವು ಪದೇ ಪದೇ ಮುಟ್ಟುವ (ಸ್ಪರ್ಶಿಸುವ) 

ಸ್ಥಳ / ಜಾಗಗಳನ್ನು ಸೋಂಕುನಿವಾರಕ ದ್ರಾವಣದಿಂದ (sanitizer) ಆಗಾಗ್ಗೆ ಸ್ವಚ್ಛಗೊಳಿಸಿ.

10. ಸಾಬೂನಿನಿಂದ ಆಗಾಗ್ಗೆ ಕೈಗಳನ್ನು 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸಿ. 

11. ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಮತ್ತು ಪ್ರತಿನಿತ್ಯ ವ್ಯಾಯಾಮ ಮಾಡಿ.

12. ನೀವು ಲಸಿಕೆ ಹಾಕಿಸಿಕೊಳ್ಳಲು ಅರ್ಹ-

ರಾಗಿದ್ದರೆ, ಸಾಧ್ಯವಾದಷ್ಟು ಬೇಗ ಲಸಿಕೆ

ಹಾಕಿಸಿಕೊಳ್ಳಿ.

13. ನಿಮಗೆ ಯಾವುದಾದರೂ ರೋಗ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣ ವೈದ್ಯರ ಸಲಹೆ ಪಡೆಯಿರಿ. 


ಕೆಲವು ರೋಗಿಗಳಿಗೆ ಹೀಗೆ ಲಕ್ಷಣಗಳಿರುತ್ತವೆ..

1.ರುಚಿ ಮತ್ತು ವಾಸನೆ ಮತ್ತು ಗ್ರಹಿಕೆಯನ್ನು ಕಳೆದುಕೊಳ್ಳುವುದು

2.ಮೂಗು ಕಟ್ಟುವುದು,ಕಣ್ಣು ಉರಿ / ಕಣ್ಣಿನ ನವೆ

3.ಗಂಟಲು ಕೆರೆತ ಮತ್ತು ತಲೆ ನೋವು 

4.ಮೈಕೈ ನೋವು ಅಥವಾ ಸಂಧಿವಾತ

ಮತ್ತು ಚರ್ಮದ ಮೇಲೆ ಬೊಬ್ಬೆ 

5.ವಾಂತಿ,ಭೇದಿ,ತಲೆ ಸುತ್ತುವಿಕೆ,ಕಿರಿಕಿರಿ, 

ಗೊಂದಲ ಮತ್ತು  ಏಕಾಗ್ರತೆ 

ಕಡಿಮೆಯಾಗುವುದು (Reduced 

consciousness)

6.ಆತಂಕ,ಖಿನ್ನತೆ ಮತ್ತು ನಿದ್ರಾಹೀನತೆ. 


ಕೊರೊನಾ ಸೋಂಕಿತರು ಬೇಗನೆ ಚೇತರಿಸಿಕೊಳ್ಳಲು ನೀಡಬೇಕಾದ ಆಹಾರಕ್ರಮದ ಬಗ್ಗೆ ಹೇಳಿದ್ದೇವೆ ನೋಡಿ:

7 ಗಂಟೆಗೆ ಬ್ರೇಕ್‌ಫಾಸ್ಟ್ ಕೊರೊನಾ ಸೋಂಕಿತರಿಗೆ ಬೆಳಗ್ಗೆ 7 ಗಂಟೆಗೆ ಆಹಾರ ನೀಡಬೇಕು ಬೆಳಗ್ಗೆ 7 ಗಂಟೆಗೆ ಬಿಸಿ ಉಪಾಹಾರ ನೀಡಬೇಕು.


ಉಪಾಹಾರಕ್ಕೆ ರವೆ ಇಡ್ಲಿ, ಪೊಂಗಲ್ , ದೋಸೆ, ಕಿಚಡಿ, ಉಪ್ಪಿಟ್ಟು ಈ ರೀತಿಯ ಆಹಾರಗಳನ್ನು ನೀಡಬಹುದು. 10 ಗಂಟೆಗೆ ಹಣ್ಣಿನ ಜ್ಯೂಸ್ ಅಥವಾ ಗಂಜಿ ನೀಡಬೇಕು.

ಮಧ್ಯಾಹ್ನದ ಊಟ ಮಧ್ಯಾಹ್ನ ಬಿಸಿ ಬಿಸಿಯಾದ ಅನ್ನ ಅಥವಾ ಚಪಾತಿ ತಿನ್ನಬಹುದು. ಇನ್ನು ಆಹಾರದಲ್ಲಿ ಮೊಸರು, ಮೊಟ್ಟೆ, ಪಲ್ಯ ಇವುಗಳನ್ನು ನೀಡಬೇಕು. ಮೊಟ್ಟೆ ತಿನ್ನದವರು ಮೊಟ್ಟೆಯ ಬದಲಿಗೆ ಬಾಳೆಹಣ್ಣು ಸೇವಿಸುವುದು ಒಳ್ಳೆಯದು. ಸಂಜೆ ಸಂಜೆ ಹಣ್ಣುಗಳು, ಏಲಕ್ಕಿ ಬಾಳೆಹಣ್ಣು, ಪ್ರೊಟೀನ್ ಬಿಸ್ಕೆಟ್, ಖರ್ಜೂರ, ವಿಟಮಿನ್ ಸಿ ಅಧಿಕವಿರುವ ಹಣ್ಣುಗಳನ್ನು ನೀಡಬೇಕು..

ರಾತ್ರಿ ರಾತ್ರಿ ಚಪಾತಿ, ಪಲ್ಯ, ಬೇಳೆ ಸಾರು, ಬೇಕಿದ್ದರೆ ಸ್ವಲ್ಪ ಅನ್ನ ಇವುಗಳನ್ನು ನೀಡಬೇಕು. ರೋಗಿಗೆ ಕೊಡುವ ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚಿರಲಿ. ಇದರಿಂದ ಪೌಷ್ಠಿಕಾಂಶಗಳು ದೊರೆಯುತ್ತದೆ. ಪಪ್ಪಾಯಿ ಹಣ್ಣು, ಕಿವಿ ಹಣ್ಣು, ಮೂಸಂಬಿ, ಕಿತ್ತಳೆ ಇವೆಲ್ಲಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಆಹಾರಗಳನ್ನು ನೀಡಿದರೆ ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ.



ಲಸಿಕೆ ಪಡೆದರೆ ಲಾಭವೇನು? 


1.ಲಸಿಕೆ ಹಾಕಿಸಿಕೊಂಡರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳುವುದರ ಜೊತೆಗೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. 


2. ಲಸಿಕೆ ಪಡೆದ ಎಷ್ಟು ದಿನಗಳ ನಂತರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ? 

ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆದ ಎರಡು ವಾರಗಳ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 


3.  ಕೋವ್ಯಾಕ್ಸಿನ್, ಕೋವಿಶೀಲ್ಡ್ ಪರಿಣಾಮವೇನು? 

ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆ ನೀಡಲಾಗುತ್ತಿದೆ.  ಕಂಪನಿ ಮಾತ್ರ ಬೇರೆ ಬೇರೆ ಇದೆ. ಈ ಎರಡೂ ಲಸಿಕೆಗಳ ಪರಿಣಾಮ ಒಂದೇ ಆಗಿದೆ. ಯಾವ ವಿಯಾಕ್ಸಿನ್ ತೆಗೆದುಕೊಳ್ಳಬೇಕು ಎಂಬ ಗೊಂದಲಬೇಡ. ಬದಲಿಗೆ ಎರಡರಲ್ಲಿ ಯಾವುದನ್ನು ಬೇಕಾದರೂ ತೆಗೆದುಕೊಳ್ಳಬಹುದು. 


4. ಲಸಿಕೆ ಪಡೆದರೆ ಸೋಂಕು ಬರುವುದಿಲ್ಲವೆ? 

ಕೋವಿಡ್ ಲಸಿಕೆ ಹಾಕಿಸಿಕೊಂಡ ಕೂಡಲೆ ಸೋಂಕು ಹರಡುವುದಿಲ್ಲ ಎಂದಲ್ಲ. ಸೋಂಕು ತಗುಲಿದರೂ ಅದರ ತೀವ್ರತೆ ಕಡಿಮೆ ಇರುತ್ತದೆ. ಲಸಿಕೆ ಪಡೆದರೂ ಇನ್ನೂ ಒಂದು ವರ್ಷ ಮಾಸ್ಕ್ ಧರಿಸುವುದು ಸೇರಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 


5. ಮೊದಲ ಡೋಸ್ ಕೋವ್ಯಾಕ್ಸಿನ್ ನಂತರದ ಡೋಸ್ ಕೋವಿಶೀಲ್ಡ್ ಪಡೆಯಬಹುದೆ? 

ಮೊದಲ ಡೋಸ್ ಯಾವುದನ್ನು ಪಡೆದಿರುತ್ತೀರೊ ನಂತರದ ಡೋಸ್ ಕೂಡ ಅದೇ ಪಡೆಯಬೇಕು. ಮೊದಲ ಡೋಸ್ ಕೊಟ್ಟ ಸಮಯದಲ್ಲೆ ಇಲಾಖೆಯ ಆ್ಯಪ್ ನಲ್ಲಿ ಸಂಪೂರ್ಣ ಮಾಹಿತಿ ದಾಖಲಾಗಿರುತ್ತದೆ. ಎರಡನೆ ಡೋಸ್ ಪಡೆಯಲು ಹೋದಾಗ ಆ್ಯಪ್ ಮಾಹಿತಿ ಆಧರಿಸಿ ಲಸಿಕೆ ಕೊಡಲಾಗುತ್ತದೆ ಇದರ ಬಗ್ಗೆ ಗೊಂದಲಬೇಡ. 


6. ಲಸಿಕೆ ಪಡೆದವರಲ್ಲಿ ಎಷ್ಟು ಜನರಿಗೆ ಸೋಂಕು ಬಂದಿದೆ, ಮೃತಪಟ್ಟಿದ್ದಾರೆಯೇ? 

ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಶೇ. 1.03. ಮಂದಿಗೆ ಮಾತ್ರ ಸೋಂಕು ಬಂದಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಶೇ.1.04 ಜನರಿಗೆ ಸೋಂಕು ತಗುಲಿದೆ. ಇನ್ನು ಲಸಿಕೆ ಪಡೆದ ನಂತರವೂ ಸೋಂಕು ತಗುಲಿ ಯಾರೊಬ್ಬರೂ ಈವರೆಗೆ ಮೃತಪಟ್ಟಿಲ್ಲ. ಸಾವಿನ ಪ್ರಮಾಣ ಶೇ. 0 ಇದೆ.


7. ಕೋವಿಡ್  ವ್ಯಾಕ್ಸಿನ್ ನಮ್ಮ ದೇಶದ ಪ್ರತಿಷ್ಠಿತ ವೈದ್ಯ ಇಲಾಖೆಯಿಂದ ಸತತ ಪರೀಕ್ಷೆಗೆ ಒಳಪಟ್ಟು ವಿಶ್ವ ಆರೋಗ್ಯ ಸಂಸ್ಥೆಯಿಂದಾನು ಅನುಮತಿಸಿ ವಿವಿಧ ದೇಶಗಳ ವೈದ್ಯರಿಂದಲೂ ಪ್ರಾಮಾಣಿಕರಿಸಿದ್ದು ಯಾವುದೆ ಅನುಮಾನ ಬೇಡ ...ಊಹಾಪೋಹಗಳಿಗೆ ಕಿವಿಗೊಡಬೇಡಿ ..


Reading Time:

Popular Posts