ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೇಹವನ್ನು ತಂಪಾಗಿಡಲು 11 ಸೂತ್ರಗಳು. - Jiyo Jee Barke|Live Free

LATEST POSTS

Saturday, May 15, 2021

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ದೇಹವನ್ನು ತಂಪಾಗಿಡಲು 11 ಸೂತ್ರಗಳು.



ನಾವು ಈ   ಲೇಖನದಲ್ಲಿ  ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಮನೆಯ ಸಿಧೌಷದಿಗಳ ಬಗ್ಗೆ ಹಾಗೂ ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪಾಗಿಸುವ ಉಪಾಯಗಳ ಬಗ್ಗೆ ತಿಳಿಯೋಣ. 

ಕಷಾಯವನ್ನು ನಮ್ಮ ಆಯುರ್ವೇದದ ಒಂದು ಉತ್ತಮವಾದ ಕೊಡುಗೆ ಎಂದು ಭಾವಿಸಲಾಗಿದೆ. ಇದು ಎಲ್ಲಾ ವಯಸ್ಸಿನವರು ಸೇವಿಸುವ ಒಂದು ಪಾನೀಯವಾಗಿದೆ. ಕಷಾಯವು ನಮ್ಮ ದೇಹವನ್ನು ರೋಗಾಣುಗಳಿಂದ ರಕ್ಷಿಸಲು ಸಹಕಾರಿಯಾಗಿದೆ. ಇದು ಕೆಮ್ಮು, ನೆಗಡಿ, ಜ್ವರ ಇತ್ಯಾದಿ ರೋಗಗಳಿಗೆ ರಾಮಬಾಣ ಎಂದರೆ ತಪ್ಪಾಗದು.




ಕಷಾಯ ಮಾಡುವ ವಿಧಾನ:

ಶುಂಠಿ, ಎಲಕ್ಕಿ,ಲವಂಗ, ಪತ್ರೆ, ಅಜಿವಾಣ,೪ ದಳ ತುಳಸಿ ಎಲೆ, ಕಾಳು ಮೆಣಸು, ಒಂದು ಇಂಚು ದಾಲ್ಚಿನ್ನಿ ಯನ್ನು ಎರಡು ಕಪ್ ನೀರಿಗೆ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. 5 ನಿಮಿಷದ ನಂತರ ಅದಕ್ಕೆ ಸ್ವಲ್ಪ ಬೆಲ್ಲ ಹಾಕಬೇಕು. ಬೆಲ್ಲ ಕರಗಿದ ನಂತರ ಸೋಸಿ ಬಟ್ಟಲಿಗೆ ಹಾಕಿಕೊಂಡು ಸೇವಿಸಬೇಕು. 



https://youtu.be/o9nOHXQrt20




ರೋಗ ನಿರೋಧಕ ಶಕ್ತಿ ಹೆಚ್ಚಿಸಿ:

1.ಪುದೀನ ಎಲೆ ಅಥವಾ ಓಮದಕಾಳುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಹಬೆ (ಆವಿ) ಯನ್ನು ದಿನಕ್ಕೆ ಒಂದು ಬಾರಿ ತೆಗೆದುಕೊಳ್ಳುವುದು.

2.ಒಣಕೆಮ್ಮು ಹಾಗೂ ಗಂಟಲು ಕೆರೆತವಿದ್ದಲ್ಲಿ 1  ಲವಂಗವನ್ನು ಬಾಯಿಯಲ್ಲಿ ಸ್ವಲ್ಪ ಅಗಿದು ಇಟ್ಟು ಕೊಂಡು ಮಲಗಿದರೆ ಕೆಮ್ಮು ಕಡಿಮೆಯಾಗುತ್ತದೆ. 

3.ಪ್ರತಿದಿನ ಯೋಗಾಸನ , ಪ್ರಾಣಾಯಾಮ ಹಾಗೂ ಧ್ಯಾನ ಅಭ್ಯಾಸವನ್ನು ಕನಿಷ್ಠ 30 ನಿಮಿಷಗಳ ಕಾಲ ನಡೆಸುವುದು.

4.ನಿಯಮಿತವಾಗಿ ಬಿಸಿ ನೀರು ಕುಡಿಯುವುದು.

5.ಅಡುಗೆಯಲ್ಲಿ ಅರಿಶಿನ , ಜೀರಿಗೆ, ಧನಿಯಾ ಹಾಗೂ ಬೆಳ್ಳುಳ್ಳಿಯನ್ನು ಬಳಸುವುದು.

6.ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು 2 - 3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು ನಂತರ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಬೇಕು . ಇದನ್ನು ದಿನಕ್ಕೆರಡು ಬಾರಿ ಮಾಡುವುದು.

7.ಒಣಕೆಮ್ಮು ಹಾಗೂ ಗಂಟಲು ಕೆರೆತವಿದ್ದಲ್ಲಿ 1 -2 ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನು ತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2 - 3 ಬಾರಿ ಸೇವಿಸುವುದು.



8.ಪ್ರತಿದಿನ ಬೆಳಿಗ್ಗೆ ಶುಂಠಿಯನ್ನು ಕುಟ್ಟಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿಕೊಂಡು ಶುಂಠಿ ಕಷಾಯ ಮಾಡಿ ಕುಡಿಯಬೇಕು. 

9.ಪ್ರತಿದಿನ ಬೆಳಿಗ್ಗೆ 4-5 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಬರಿಬಾಯಲ್ಲಿ ತಿನ್ನುವದರಿಂದ ಕೆಮ್ಮು, ನೆಗಡಿ ಬರುವುದಿಲ್ಲ.

 

10.ಪ್ರತಿದಿನ ಒಣ ಶುಂಠಿ ಮತ್ತು ಬೆಲ್ಲವನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿ ಸ್ವಲ್ಪ ಸ್ವಲ್ಪ ತಿನ್ನುವುದರಿಂದ ಕೆಮ್ಮು, ನೆಗಡಿ ಬರುವುದಿಲ್ಲ. 

11.ಪ್ರತಿದಿನ ಬೆಳಿಗ್ಗೆ 2 ಕಪ್ ಬಿಸಿ ನೀರಿಗೆ ನಿಂಬೆ ರಸ ಹಾಕಿ ಸೇವಿಸುವುದರಿಂದ ನಿಮ್ಮ ದೇಹವನ್ನು ತಂಪಾಗಿಡಬಹುದು ಮತ್ತು ಬೊಜ್ಜನ್ನು ಕರಗಿಸುವುದು. 












ಬೇಸಿಗೆಯ ಬಿಸಿಯನ್ನು ತಂಪಾಗಿಸಬೇಕೇ:

1.ದಿನಕ್ಕೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ತೂಕ ಕಮ್ಮಿಯಾಗುವುದರ ಜೊತೆಗೆ ಆಹಾರದಲ್ಲಿರುವ ಅಸಿಡಿಟಿ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

2.ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

3.ದೇಹದ ಉಷ್ಣತೆನ್ನು ಸಕ್ಕರೆ ಇರುವ ಆಹಾರ ಪದಾರ್ಥಗಳೂ ಹೆಚ್ಚಿಸುತ್ತವೆ. ಜೇನು ಮತ್ತು ಕಾಕಂಬಿ ಸೇವನೆಯನ್ನು ಬಿಡಿ. ತರಕಾರಿ ಮತ್ತು ಹಣ್ಣುಗಳಲ್ಲಿ ಇರುವ ನೈಸರ್ಗಿಕ ಸಕ್ಕರೆಯನ್ನು ಅಧಿಕವಾಗಿ ಸೇವಿಸಿ.

4.ಬೇಸಿಗೆಯಲ್ಲಿ ಉಷ್ಣವನ್ನುಂಟು ಮಾಡುವ ಆಹಾರಗಳನ್ನು ಸೇವಿಸದಿರಿ. ಪಾಲಾಕ್, ಕರಿಮೆಣಸು, ಮೂಲಂಗಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸದಿರಿ. ಮಸಾಲೆ ಪದಾರ್ಥಗಳ ಸೇವನೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ.

5.ಒಣ ಹಣ್ಣುಗಳು ಆರೋಗ್ಯಕರ ಮತ್ತು ಪೋಷಕಾಂಶಭರಿತವಾಗಿರುತ್ತವೆ. ಅದಾಗ್ಯೂ ಇವುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡುತ್ತವೆ ಆದ್ದರಿಂದ ಬೇಸಿಗೆಯಲ್ಲಿ ಇವುಗಳನ್ನು ಸೇವಿಸದಿರುವುದೇ ಒಳಿತು. ಬೇಸಿಗೆಯಲ್ಲಿ ಒಣಹಣ್ಣುಗಳ ಬದಲಿಗೆ ತಾಜಾ ಹಣ್ಣುಗಳನ್ನೇ ಅಧಿಕವಾಗಿ ಸೇವಿಸಿ.

6.ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡು ಕೆಫೇನ್ ಮತ್ತು ಸಕ್ಕರೆ ಬೆರೆತ ಪಾನೀಯಗಳನ್ನು ಆದಷ್ಟು ಬೇಸಿಗೆಯಲ್ಲಿ ಕಡಿಮೆ ಸೇವಿಸುವುದು ಒಳಿತು.

7.ನಿಮ್ಮ ಪಾದಗಳನ್ನು ಬಕೆಟ್‌ಗಳಲ್ಲಿ ನೆನೆಸಿ, ಒದ್ದೆಯಾದ ಟವೆಲ್‌ಗಳನ್ನು ಭುಜದ ಮೇಲೆ ಅಥವಾ ತಲೆಯ ಮೇಲೆ ಇರಿಸಿ.

8.ಪಾತ್ರೆ ಅಥವಾ ಬಕೆಟ್ ತುಂಬಾ ನೀರು ಶೇಖರಿಸಿ ರೂಮ್ನಲ್ಲಿ ಇರಿಸಿ , ತಾಪಮಾನ ಇಳಿಯುತ್ತದೆ.

9.ಕಿಡಕಿಗೆ ಒದ್ದೆಯಾಗಿರುವ ಪಂಚೆ ಅಥವಾ ಟವೆಲ್ ಹಾಕಿ, ರೂಮ್ ತಂಪಾಗುವುದು.

10.ತಾಜಾ ಹಣ್ಣಿನ ರಸ, ಹಣ್ಣುಗಳ ಸೇವನೆ ಅಂತೆಯೇ ನಿಯಮಿತವಾಗಿ ನೀರನ್ನು ಸೇವಿಸುತ್ತಲೇ ಇರಬೇಕು.

11.ಪ್ರತಿದಿನ ಬೆಳಿಗ್ಗೆ 2 ಕಪ್ ಬಿಸಿ ನೀರಿಗೆ ನಿಂಬೆ ರಸ ಹಾಕಿ ಸೇವಿಸುವುದರಿಂದ ನಿಮ್ಮ ದೇಹವನ್ನು ತಂಪಾಗಿಡಬಹುದು. 

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಣ್ಣಗಾಗಿಸುವ ನಮ್ಮ ಸಲಹೆಗಳು ನಿಮಗೆ ಇಷ್ಟವಾದವು ಎಂದು ನಾನು ಭಾವಿಸುತ್ತೇನೆ.

                                                 😊😊ಧನ್ಯವಾದಗಳು😊😊

2 comments:

Popular Posts